ಬುಧವಾರ, ಆಗಸ್ಟ್ 29, 2018
ಮಂಗಳವಾರ, ಆಗಸ್ಟ್ 28, 2018
ಅರೆಹೊಳೆ ಸದಾಶಿವ ರಾವ್ - " ನೃತ್ಯ ಗಾಥಾ " - ನೃತ್ಯ ನಾಟಕಗಳ ವಿನೂತನ ಸಾಧ್ಯತೆ
ಬಹಳದಿನಗಳ ಹಿಂದೆ ಗುರುತು ಹಾಕಿಕೊಂಡಿದ್ದ ದಿನವಿದು. ಸುಧೀರ್, ಮಾನಸಿ ಜೋಡಿ, ಶ್ರೀಪಾದ್ ಭಟ್ ಜೊತೆ.....ಖಂಡಿತಕ್ಕೂ ನಿರಾಸೆಗೊಳಿಸದ ಸಂಜೆ ಇದಾಗುವ ಭರವಸೆ ಇತ್ತು. ಅನಘಶ್ರೀ ಅದನ್ನು ಹುಸಿಗೊಳಿಸಲಿಲ್ಲ. ನೀಲಾಂಜನಾ, ಶಾಂತಲಾ ಹಾಗೂಉಮ್ರಾವೋಜಾನ್ ಎಂಬ ಮಹಾನ್ ನೃತ್ಯಗಾತಿಯರು,ಬದುಕನ್ನೇ ಕಲೆಗರ್ಪಿಸಿಕೊಂಡ 'ನೃತ್ಯಗಾಥಾ' ಅಮೋಘವೇ. ಋಣಾತ್ಮಕ ಅಂಶಗಳೆಲ್ಲವನ್ನೂ ಹಿಂದಿಕ್ಕಿ ಗೆದ್ದ ಏಕವ್ಯಕ್ತಿ ಪ್ರದರ್ಶನ. ಇಂದು ಏಕವ್ಯಕ್ತಿ ನಾಟಕ ಪ್ರದರ್ಶನ ಸರ್ವವ್ಯಾಪಿಯಾಗಿ, ಪ್ರಯೋಗಶೀಲತೆಯ ಮೊನಚು ಕಳೆದುಕೊಳ್ಳುತ್ತಿರುವ ಅನುವಾರ್ಯತೆಯಲ್ಲಿ, ಹೇಗಿದ್ದೀತೋ ಎಂಬ ಕುತೂಹಲದಿಂದ ಕುಳಿತರೆ, 'ಕಳೆದು'ಹೋದದ್ದು ಗೊತ್ತಾಗಿದ್ದು ಪ್ರದರ್ಶನ ಮುಗಿದಾಗ!!!!. ಶ್ರೀಪಾದ್ ಭಟ್ ಸೋಲುವ ನಿರ್ದೇಶಕರಲ್ಲ ಎಂಬ ನಂಬಿಕೆ ಸೋಲಲಿಲ್ಲ. ಅದ್ಭುತ ಪೃಸ್ತುತಿ. ಭಟ್ಟರ ನಿರ್ದೇಶನ, ಅನಘಾಳ ಅಭಿನಯ(ನೃತ್ಯಪ್ರಧಾನ) ಚಾತುರ್ಯತೆ, ಸುಧಾ ಆಡುಕಳರ ಸಾಹಿತ್ಯ, ಮಾನಸಿ, ಪ್ರಶಾಂತ ಉದ್ಯಾವರರ ಸಹನಿರ್ದೇಶನ, ಸುಧೀರ್ ಕೊಡವೂರು ಶ್ರಮಕ್ಕೆ ಸಾಫಲ್ಯ ನೀಡಿವೆ. ಸುಧಾ ಅವರ ಸಂಭಾಷಣೆಗಳ ಗಟ್ಟಿತನ ಮತ್ತೆ ಮತ್ತೆ ಚಿಂತನೆಗೆ ಹಚ್ಚುತ್ತಿವೆ. ಕನ್ನಡ ನಾಟಕ ಲೋಕಕ್ಕೆ ಈ ಪ್ರದರ್ಶನದ ಮೂಲಕ, ನೃತ್ಯ ನಾಟಕಗಳ ವಿನೂತನ ಸಾಧ್ಯತೆಯನ್ನು ಧನಾತ್ಮಕವಾಗಿ ನಿರೂಪಿಸಿದ ಯಶಸ್ಸು.
****
ಹೀಗೆ ಕಳೆದ ವಾರಾಂತ್ಯದ ಮೂರುದಿನಗಳು,ಅತ್ಯಂತ ಖುಷಿಯ ದಿನಗಳ ಸಾಲಿನಲ್ಲಿ ದಾಖಲಾದುವು. ಇದನ್ನು ಸಾಧ್ಯಮಾಡಿದ ಎಲ್ಲರಿಗೂ, ಜೊತೆಗಿದ್ದ ಕುಟುಂಬಕ್ಕೂ ಆಭಾರಿ.
****
ಹೀಗೆ ಕಳೆದ ವಾರಾಂತ್ಯದ ಮೂರುದಿನಗಳು,ಅತ್ಯಂತ ಖುಷಿಯ ದಿನಗಳ ಸಾಲಿನಲ್ಲಿ ದಾಖಲಾದುವು. ಇದನ್ನು ಸಾಧ್ಯಮಾಡಿದ ಎಲ್ಲರಿಗೂ, ಜೊತೆಗಿದ್ದ ಕುಟುಂಬಕ್ಕೂ ಆಭಾರಿ.
anaghashree |
ಶುಕ್ರವಾರ, ಆಗಸ್ಟ್ 24, 2018
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)