ಗುರುವಾರ, ಜೂನ್ 30, 2016

ನೃತ್ಯ ನಿಕೇತನ ಕೊಡವೂರು [ ರಿ } -ಪಂಡಿತ್ ರವಿಕಿರಣ್ ಮಣಿಪಾಲ- ಹಿಂದುಸ್ತಾನಿ ಗಾಯನ -3- 7-2016

ಪಂಡಿತ್ ರವಿಕಿರಣ್ ಮಣಿಪಾಲ್ - Pt Ravikiran Manipal Part 2

ನಿಡುವಜೆ ರಾಮ ಭಟ್ - ಸುರಭಿಯ ನಾಟ್ಯದ ಒಡನಾಟ

muraleedhara upadhya hiriadka: Surabhiya Naatya Odanaata: ಸುರಭಿಯ  ನಾಟ್ಯದ ಒಡನಾಟ ನಿಡುವಜೆ ರಾಮ ಭಟ್ ಚಿತ್ರ: ಮುರಳೀಧರ್, ಕೊಡವೂರು.       ನೃತ್ಯದ ಬಗ್ಗೆ ಅದಮ್ಯ ಪ್ರೀತಿ ಬೆಳೆಸಿಕೊಂಡಿರುವ ಬಾಲ ಪ್ರತಿಭೆ ಸುರಭಿ, ಉಡುಪ...

ನಿಡುವಜೆ ರಾಮ ಭಟ್ - ಸುರಭಿಯ ನಾಟ್ಯದ ಒಡನಾಟ


Wednesday, June 29, 2016ಸುರಭಿಯ  ನಾಟ್ಯದ ಒಡನಾಟ
ನಿಡುವಜೆ ರಾಮ ಭಟ್
ಚಿತ್ರ: ಮುರಳೀಧರ್, ಕೊಡವೂರು.
      ನೃತ್ಯದ ಬಗ್ಗೆ ಅದಮ್ಯ ಪ್ರೀತಿ ಬೆಳೆಸಿಕೊಂಡಿರುವ ಬಾಲ ಪ್ರತಿಭೆ ಸುರಭಿ,
ಉಡುಪಿಯ ಕೊಡವೂರಿನ ನೃತ್ಯ ನಿಕೇತನದ ನಿದರ್ೇಶಕ ಗುರು ವಿ||ಸುಧೀರ್ ರಾವ್, ವಿ||ಮಾನಸಿ ಸುಧೀರ್ ದಂಪತಿಯ ಸುಪುತ್ರಿ.
     ಸುರಭಿ ಕಳೆದ ಎರಡು ವರ್ಷಗಳಿಂದ ತನ್ನ ಹೆತ್ತವರ  ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದು,  ಸಂಸ್ಥೆಯ ನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳಲ್ಲಿ ತನ್ನ ನೃತ್ಯ ಪ್ರದರ್ಶನವನ್ನು ನೀಡಿದ್ದಾಳೆ. ಪ್ರಸಿದ್ಧ ರಂಗ ನಿದರ್ೇಶಕರ ಎರಡು ನಾಡಕ ಕಮ್ಮಟಗಳಲ್ಲಿ ತರಬೇತಿ ಪಡೆದಿರುವ ಸುರಭಿ ಹಲವು ನಾಟಕ, ನೃತ್ಯ ರೂಪಕ, ನೃತ್ಯ ನಾಟಕಗಳಲ್ಲಿ ಪಾತ್ರವಹಿಸಿದ್ದಾಳೆ. ಚಿತ್ರಕಲೆ, ಸಾಹಿತ್ಯಗಳಲ್ಲಿ ವಿಶೇಷ ಆಸಕ್ತಿ ಇರುವ ಇವಳು ಜಿಲ್ಲಾ ಮಟ್ಟದ ಕಥೆ ಹೇಳುವ ಸ್ಪಧರ್ೆಯಲ್ಲಿ ಬಹುಮಾನ ಪಡೆದಿದ್ದಾಳೆ.
     ಇಷ್ಟೆಲ್ಲ ಸಾಧನೆಗೈದ ಈ ಬಾಲೆ ಉಡುಪಿಯ ಸೈಂಟ್ಮೇರೀಸ್ ಶಾಲೆಯ ಮೂರನೇ ತರಗತಿಯ ವಿದ್ಯಾಥರ್ಿನಿ ಎಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೇ? ಈಕೆ ತನ್ನ ಎಂಟನೇ ಹುಟ್ಟುಹಬ್ಬದಂದು ಭರತನಾಟ್ಯ ರಂಗಪ್ರವೇಶ ಮಾಡಿ ಇನ್ನೂ ಅಚ್ಚರಿ ಮೂಡಿಸಿದ್ದಾಳೆ!
     ಇತ್ತೀಚೆಗೆ ಉಡುಪಿಯ ರಾಜಾಂಗಣ ಸಭಾಂಗಣದಲ್ಲಿ ಪಯರ್ಾಯ ಶ್ರೀ ಪೇಜಾವರ ಅಧೋಕ್ಷಜ ಶ್ರೀಕೃಷ್ಣ ಮಠದ ಉಭಯ ಶ್ರೀಪಾದರ ಆಶೀವರ್ಾದದೊಂದಿಗೆ ತುಂಬು ಪ್ರೇಕ್ಷಕರ ಸಮ್ಮುಖದಲ್ಲಿ ನೀಡಿದ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
     ಮೊದಲಿಗೆ ಪುಷ್ಪಾಂಜಲಿ(ವೃಂದಾವನ ಸಾರಂಗ, ಆದಿತಾಳ)ಯಲ್ಲಿ 'ಕಾಲೇವರ್ಷತು ಪರ್ಜನ್ಯ' ಎಂಬ ದೀಪಕ್ ಹೆಬ್ಬಾರರ ರಚನೆಯನ್ನು ಸಂಚಾರಿಭಾವದಲ್ಲಿ ಪ್ರದಶರ್ಿಸಿದ್ದು, ಎರಡನೇ ಕೃತಿ 'ಗಜಾನನಯುತಂ ಗಣೇಶ್ವರಂ' ಇದರಲ್ಲಿ ಗಣಪತಿಗೆ ಆನೆಯ ಮುಖ ಬಂದ ಕತೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದಳು.
     ನಂತರದಲ್ಲಿ ಪ್ರಮುಖ ಪದವರ್ಣ.  'ಸವಿಯುವ ಬಾ ಸ್ನೇಹ ಪ್ರೇಮಗಳ'(ಶುದ್ಧ ಧನ್ಯಾಸಿ, ಆದಿತಾಳ) ಎಂಬ ಪ್ರಸನ್ನ ಬೆಂಗಳೂರು ಅವರ ರಚನೆಗೆ ಬಾಲಸುಬ್ರಹ್ಮಣ್ಯ ಶರ್ಮ ಅವರು ನೃತ್ಯ ಸಂಯೋಜನೆ ಮಾಡಿದ್ದು, ಈ ಕೃತಿಯಲ್ಲಿ ಸುದಾಮನ ಕತೆಯನ್ನು ಆಯ್ದುಕೊಂಡು ಸ್ನೇಹವೆಂದರೆ ಕೃಷ್ಣ ಸುದಾಮನಂತಿರಬೇಕು ಎಂಬುದನ್ನು ಸೊಗಸಾಗಿ ಸಾರಲಾಯಿತು. ಅಜರ್ುನನಿಗೆ ಶ್ರೀಕೃಷ್ಣನ ಸಾರಥ್ಯ, ಗೀತೋಪದೇಶ ಮೊದಲಾದ ಸನ್ನಿವೇಶಗಳ ಅಭಿನಯವನ್ನು ಈ ಬಾಲೆ ಮಾಡಿದ್ದು ನೋಡುಗರ ಮನಕ್ಕೆ ಮುದ ನೀಡಿತು. ಗೀತೋಪದೇಶದಲ್ಲಿ ಯದಾ ಯದಾಹಿ ಧರ್ಮಸ್ಯ . ., ಪರಿತ್ರಾಣಾಯ ಸಾಧೂನಾಂ . . ಮೊದಲಾದ ಸನ್ನಿವೇಶಗಳನ್ನು ಸುಮಾರು 20 ನಿಮಿಷಗಳ ಕಾಲ ದಣಿವಿಲ್ಲದೆ ಪ್ರಸ್ತುತಪಡಿಸಿದ್ದು ಅಚ್ಚರಿ ಮೂಡಿಸಿತು.
     ಮುಂದೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಕೃತಿ ಮಕ್ಕಳ ಮಗ್ಗಿಯಂತಿರುವ ಸಾಹಿತ್ಯ 'ಒಂದು ಎಂದರೆ ಒಂದು'(ರಾಗ ಮಾಲಿಕೆ, ಆದಿತಾಳ)ಎಂಬ ಒಂದರಿಂದ ಹತ್ತು ಅಂಕೆಯಲ್ಲಿ ಕೃಷ್ಣನ ಜನನದಿಂದ ಕಂಸನ ಮರಣದ ವರೆಗಿನ ಸನ್ನಿವೇಶಗಳನ್ನು ಸಂಚಾರಿ ಭಾವದಲ್ಲಿ ಪ್ರದಶರ್ಿಸಿದಳು.  ಮಧೂರು ಬಾಲಸುಬ್ರಹ್ಮಣ್ಯಂ ಸಂಗೀತ ಸಂಯೋಜಿಸಿದ ಈ ಕೃತಿಯಲ್ಲಿ ಕೃಷ್ಣನ ಜನನ, ಗೋಕುಲದಲ್ಲಿ ಬಾಲಲೀಲೆ ಮೊದಲಾದುವುಗಳನ್ನು ನಿರೂಪಿಸುವಲ್ಲಿಯೂ ಈ ಬಾಲೆ ಹಿಂದೆ ಬೀಳಲಿಲ್ಲ!

     ಅಠಾಣ ರಾಗ, ರೂಪಕತಾಳದಲ್ಲಿ ಮಧುರೈ ಮೀನಾಕ್ಷಿಯ ಕುರಿತಾಗಿ 'ಮಧುರಗಾನ ರೂಪಿಣಿ ಮಧುರಾಪುರಿ ವಾಸಿನಿ' ಎಂಬ ಕೃತಿಯ 'ತಿಲ್ಲಾನ'ವನ್ನು ಪ್ರದಶರ್ಿಸಿ ನೃತ್ಯವನ್ನು ಸಮಾಪನಗೊಳಿಸುವಲ್ಲಿ ಯಶಸ್ವಿಯಾದಳು. ಮನೆಯಲ್ಲಿ ಆಟವಾಡಿಕೊಂಡು ಇರಬೇಕಾದ ಎಳೆಯ ಪ್ರಾಯದ ಈಕೆ ನಾಟ್ಯದೊಡನೆಯೇ ಆಟವಾಡಿ ಕಲೆಯ ಅಪೂರ್ವ ಪ್ರದರ್ಶನಗೈದಿರುವುದು ಶ್ಲಾಘನೀಯ.
    ಹಿನ್ನೆಲೆಯಲ್ಲಿ ವಿ||ಸುಧೀರ್ ರಾವ್ (ನಟುವಾಂಗ), ಉನ್ನಿಕೃಷ್ಣನ್ ನಂಬೂದರಿ ಕುತ್ತಿಕೋಲ್ (ಹಾಡುಗಾರಿಕೆ), ದೇವೇಶ್ ಭಟ್ ಕಿದಿಯೂರು(ಮೃದಂಗ), ಪಿ.ಶ್ರೀಧರ ಆಚಾರ್ಯ, ಪಾಡಿಗಾರು (ಪಿಟೀಲು), ದೀಪಕ್ ಹೆಬ್ಬಾರ್(ಕೊಳಲು), ಪ್ರಕಾಶ್ ಕುಂಜಿಬೆಎಟ್ಟು (ವಣರ್ಾಲಂಕಾರ) ಉತ್ತಮವಾಗಿ ಸಹಕರಿಸಿದರು.
    ನೃತ್ಯ ನಿಕೇತನ ಕೊಡವೂರು ಸಂಸ್ಥೆಯು ತನ್ನ ರಜತ ಮಹೋಹತ್ಸವದ ಅಂಗವಾಗಿ ಹತ್ತು ದಿನಗಳ ಕಾಲ ನೃತ್ಯ, ಗಾಯನ, ನಾಟಕ, ಯಕ್ಷಗಾನ, ರೂಪಕ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದು ಸ್ತುತ್ಯರ್ಹವೆನಿಸಿತು.
**  **  **
ಎನ್. ರಾಮ ಭಟ್, 'ಪ್ರಶಾಂತಿ',
ಗುಂ

ಭಾನುವಾರ, ಜೂನ್ 26, 2016

ಜೀವನ್ ಶೆಟ್ಟಿ - ನೃತ್ಯ ನಿಕೇತನ ರಜತ ಪಥದ ನೃತ್ಯ - ನಾಟಕಗಳು

***ನಾಟ್ಯ ರೂಪಕಗಳಲ್ಲಿ ಕಣ್ಮನ ತಣಿಸಿದ ದೃಶ್ಯ ಕಾವ್ಯಗಳು - ಒಂದು ಅನುಭವ
ಉಡುಪಿಯಲ್ಲಿ ಎಡೆಬಿಡದ ಸಾಂಸ್ಕೃತಿಕ ಕಾರ್ಯಕ್ರಮಗಳು ಯಾವುದೇ ಋತುಭೇದವಿಲ್ಲದೆ ಜರುಗುತ್ತಿರುತ್ತವೆ. ಅದರಲ್ಲಿ ಇತ್ತೀಚೆಗೆ ಭರತ ನಾಟ್ಯ ಕಲೆಯನ್ನು ವಿಶಿಷ್ಟವಾಗಿ ಪ್ರಸ್ತುತ ಪಡಿಸಲು ಪ್ರಯತ್ನಿಸುವ ನೃತ್ಯನಿಕೇತನ ಕೊಡವೂರು ಸಂಸ್ಥೆಯು ತನ್ನ ರಜತವರ್ಷದ ಸಲುವಾಗಿ ಹತ್ತು ದಿನಗಳ 'ನೃತ್ಯ ಸಂಗೀತ ನಾಟಕ ಉತ್ಸವ'ವನ್ನು ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಹಮ್ಮಿಕೊಂಡಿತ್ತು. ಮಾನಸಿಯವರ 'ಮಹಾನಾಯಿಕೆ ಹಿಡಿ೦ಬೆ', ತ್ರಿವಳಿ ಗಾನಾಮೃತಂ, ದಿವ್ಯಾರವಿಯವರ 'ಮಂಜರಿ', ಸ್ಪೂರ್ತಿ ಬೆ೦ಗಳೂರು ಅವರ 'ನೃತ್ಯ ವರ್ಷ', ಡಾ ಶ್ರೀಪಾದ ಭಟ್ ಅವರ 'ಮಹಿಳಾ ಭಾರತ' ನಾಟಕ ಮತ್ತು 'ಚಿತ್ರಾ' ನೃತ್ಯ ನಾಟಕ, ಸಂಸ್ಥೆಯ ವಿದ್ಯಾರ್ಥಿಗಳಿಂದ 'ನೃತ್ಯ ದರ್ಪಣಂ', ದೀಪಕ್ ಹೆಬ್ಬಾರ್ ಅವರ ವೇಣುವಾದನ ಹಾಗೂ ಸುರಭಿಯ 'ನೃತ್ಯಾರ್ಪಣಂ' ಕಲಾಸಕ್ತ ಪ್ರೇಕ್ಷಕವರ್ಗಕ್ಕೆ ರಸದೌತಣ ನೀಡಿತ್ತು. ಅವುಗಳಲ್ಲಿ ಹೊಸ ಪ್ರಯೋಗ ಎಂಬ ಟ್ಯಾಗ್ ನ ಟ್ಯಾಗೋರ್ ರಚಿತ 'ಚಿತ್ರಾ' ನೃತ್ಯ ನಾಟಕ ಮತ್ತು ಸುರಭಿಯ 'ರಂಗ ಪ್ರವೇಶ' ಗಮನ ಸೆಳೆಯಿತು.
'ಚಿತ್ರಾ' ದೃಶ್ಯಕಾವ್ಯವನ್ನು ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ 'ಅವಧಿ'ಯಲ್ಲಿ ಅಹಲ್ಯಾ ಬಲ್ಲಾಳ್ ಅವರು ಬರೆದಿದ್ದಾರೆ. ಶಾಸ್ತ್ರೀಯ-ಜನಪದ-ಯಕ್ಷಗಾನಗಳ ಮಿಶ್ರಣದ ನರ್ತನ, ಭಾವ, ಅಭಿನಯ, ಮಾತುಗಾರಿಕೆ, ನೃತ್ಯ ಸಂಯೋಜನೆ, ನಿರ್ದೇಶನ, ಸಂಗೀತ, ವಸ್ತ್ರ ವಿನ್ಯಾಸ, ರಂಗಸಜ್ಜಿಕೆಗಳ ಸಂವೇದನಾ ಶೀಲ ಸ್ಪರ್ಶ 'ಚಿತ್ರಾ' ಯಶಸ್ಸಿಗೆ ಕಾರಣ ಎನ್ನಬಹುದು. ಇಬ್ಬರು ನಟಿಯರ ಮೂಲಕ ಚಿತ್ರಾ೦ಗದೆ ಅರ್ಜುನನನ್ನು ಓಲೈಸುವ ಸಲುವಾಗಿ ಚೆಲುವೆಯಾಗಿ ಪರಿವರ್ತನೆಗೊಳ್ಳುವ ದೃಶ್ಯ ‘ಹೈಲೈಟ್’ ಭಾಗ! ಇಲ್ಲಿ ಶೃಂಗಾರ ರಸದ ಆಕರ್ಷಕ ವಾತಾವರಣ ಕೆಲಸ ಮಾಡಿದೆ. ಶಿಳ್ಳೆಗಳ ಜತೆಗೆ ‘ಒನ್ಸ್ ಮೋರ್’ ಕೂಗು ಈ ನೃತ್ಯ ರೂಪಕದಲ್ಲಿ ಕೇಳಿಸಿದೆ !
ಆಹ್ವಾನ ಪತ್ರಿಕೆಯಲ್ಲಿ ಕೊನೆಯ ದಿನ ಪುಟ್ಟ ಬಾಲೆ ಸುರಭಿಯ ರಂಗ ಪ್ರವೇಶ ಓದಿ ತುಂಬಾ ಪುಳಕಿತನಾಗಲು ಕಾರಣ ಅಂದೇ ಅವಳ ಎಂಟರ ಹುಟ್ಟುಹಬ್ಬ! ಕಳೆದ ಮೂರು ವರ್ಷಗಳಿಂದ ಸುರಭಿ ನಮ್ಮ ಗೆರೆಬರೆ ಶಾಲೆಯ ಚಿನಕುರಳಿ ವಿದ್ಯಾರ್ಥಿನಿ. ಒಂದೂವರೆ ಗಂಟೆ ಕಾಲಾವಧಿಯ ಏಕ ವ್ಯಕ್ತಿ ಭರತ ನಾಟ್ಯ ಪ್ರದರ್ಶನ ಕೊಡುವ ಮಟ್ಟಿಗೆ ತಯಾರಾದಳೇ ಎಂಬ ಕುತೂಹಲ, ಅಪಾರ ಪ್ರೇಕ್ಷರೆದುರು ನರ್ತಿಸಿದಾಗ ಬೃಹತ್ ವೇದಿಕೆಯಲ್ಲಿ ಮತ್ತು ಪರದೆಯಲ್ಲಿ ಎಲ್ಲರಂತೆ ಕಂಡು ದಂಗಾದೆ ! ಸುರಭಿಯ ಮನೆಯೇ ನೃತ್ಯ ಶಾಲೆ. ತಂದೆ ವಿದ್ವಾನ್ Sudhir Rao, ತಾಯಿ ವಿದುಷಿ Manasi Sudhirಯವರಿಂದ ಬಳುವಳಿ ಪಡೆದ ಅನನ್ಯ ಪ್ತತಿಭೆಯಾಗದಿರಲು ಸಾಧ್ಯವೇ !! ದೇಶ ಪ್ರೇಮದ ಮತ್ತು ಶ್ಯಾಮ ಸುಧಾಮರ ಸ್ನೇಹ ಬಂಧದ ಬಗ್ಗೆ ರೂಪಕಗಳನ್ನು ಸಲೀಸಾಗಿ ಪ್ರದರ್ಶಿಸಿದಳು. ಸೂಕ್ಷ್ಮ ಭಾವ, ಮುದ್ರೆ, ಹೆಜ್ಜೆಗಳನ್ನು ಚೆನ್ನಾಗಿ ಅರಗಿಸಿ ಕೊಂಡಿದ್ದಳು. ಗಾಯನ ವಾದ್ಯ ವೃಂದದವರ ಸಹಕಾರ ಸ್ತುತ್ಯಾರ್ಹ ! ಸಂಸ್ಥೆಗೂ ಸುರಭಿಗೂ ಉಜ್ವಲ ಭವಿಷ್ಯಕ್ಕೆ ಹಾರೈಸೋಣ !
Bharatanatya and Nrutya Nataka Programmes of Nritya Niketana Kodavoor { June 2016 }- Review by Jeevan Shetty

ಭಾನುವಾರ, ಜೂನ್ 19, 2016

ಉಡುಪಿ ರಾಜಾಂಗಣದಲ್ಲಿ 20 -6-2016 ದೀಪಕ್ ಹೆಬ್ಬಾರ್ - ಕೊಳಲು ವಾದನ { ನೃತ್ಯ ನಿಕೇತನ ಕೊಡವೂರು- ರಜತ ಪಥ }

ದೀಪಕ್ ಹೆಬ್ಬಾರ್ - ಕೊಳಲು ವಾದನ -Deepak Hebbar - Flute

ಉಡುಪಿ ರಾಜಾಂಗಣದಲ್ಲಿ 19-6-2016 - ನೃತ್ಯ ದರ್ಪಣ -7pm - ನೃತ್ಯ ನಿಕೇತನ ಕೊಡವೂರು - ನಿಮಗೆ ಸ್ವಾಗತ

ಗುರುವಾರ, ಜೂನ್ 16, 2016

ಉಡುಪಿ ರಾಜಾಂಗಣದಲ್ಲಿ - 17 -6- 2016- ನೃತ್ಯ ನಿಕೇತನ ಕೊಡವೂರು- ಚಿತ್ರಾ { ನೃತ್ಯ ನಾಟಕ - ನಿ-ಡಾ / ಶ್ರೀಪಾದ ಭಟ್

ಉಡುಪಿ ರಾಜಾಂಗಣದಲ್ಲಿ " ಮಹಿಳಾ ಭಾರತ " { ನಾಟಕ } -16-6-2016

ತ್ರಿವಳಿಯ ತ್ರಿಶತಿ - ತ್ರಿಮಧುರ ಗಾನೋತ್ಸವ -ಪ್ರತಿಭಾ . ಎಮ್. ಎಲ್. ಸಾಮಗ

ತ್ರಿವಳಿಯ ತ್ರಿಶತಿ - ತ್ರಿಮಧುರ ಗಾನೋತ್ಸವ | Udayavani - ಉದಯವಾಣಿ:'via Blog this'http://www.udayhttp://www.udayavani.com/sites/default/files/images/articles/17-KALA-4..5.jpgavani.com/sites/default/files/images/articles/17-KALA-4..5.jpg

ಭಾನುವಾರ, ಜೂನ್ 12, 2016

ಉಡುಪಿ ರಾಜಾಂಗಣದಲ್ಲಿ - ತ್ರಿವಳಿ ಗಾನಾಮೃತ -13- 6-2016 - ನಿಮಗೆ ಸ್ವಾಗತ

ದಿವ್ಯಾ ರವಿ ಅವರ ನೃತ್ಯ -- ಮಂಜರಿ - ಉಡುಪಿ ರಾಜಾಂಗಣದಲ್ಲಿ 14-6-2016 -7pm -ನೃತ್ಯ ನಿಕೇತನ ಕೊಡವೂರು ರಜತ ಪಥ

ಮಹಾನಾಯಿಕೆ ಹಿಡಿಂಬೆ -ವಿದುಷಿ ಮಾನಸಿ ಸುಧೀರ್- ಉಡುಪಿ ರಾಜಾಂಗಣದಲ್ಲಿ- 12-6-2016--7pm

ಗುರುವಾರ, ಜೂನ್ 9, 2016

ಸುಧಾ ಆಡುಕಳ - ಟಾಗೋರ್ ಅವರ - " ಚಿತ್ರಾ " { ನಿ- ಡಾ / ಶ್ರೀಪಾದ ಭಟ್ } ಅಬಿನಯ - ನೃತ್ಯ ನಿಕೇತನ ಕೊಡವೂರು { ರಿ }

ಹೀಗೆ.....
ಚಿತ್ರಾ ನಾಟಕ ನೋಡಿದೆ.
ಕಾವ್ಯದ ರಮ್ಯಲೋಕವನ್ನು ನಿರ್ದೇಶಕರು ರಂಗಕ್ಕಿಳಿಸಿದ್ದಾರೆ.
ಪಾತ್ರವನ್ನು ಎದೆಗಿಳಿಸಿಕೊಂಡು ತುಂಬು ಉತ್ಸಾಹದಿಂದ ನಟಿಸಿದ್ದಾರೆ ಸುಂದರ ತರಳೆಯರು.
ಅವರದು ಬರಿಯ ಅಭಿನಯವಲ್ಲ; ಚಿತ್ರಾಳ ಕಸುವನ್ನೇ ಮನದೊಳಗೆ ಇಳಿಸಿಕೊಂಡಿದ್ದಾರೆ ಎನಿಸಿತು.
ಎಲ್ಲರೂ ತುಂಬಾ ಸೂಕ್ಷ್ಮಗ್ರಾಹಿಗಳು.
ಒಂದು ಕ್ಷಣಕ್ಕೆ ಹೀಗನಿಸಿತು.
ಸಹಚರಿಯಾಗಿ ಜೊತೆಗಿರಬಲ್ಲ ಇಷ್ಟು ಅರ್ಜುನರು ಇಂದಿನ ಸಮಾಜದಲ್ಲಿರುವರೆ?
ಇಷ್ಟೂ ಚಿತ್ರೆಯರ. ನಿಜದ ಒಳಗು ಶಾಶ್ವತವೆ?
ಹಾಗಾದರೆ ಎಷ್ಟು ಸಂತೋಷ!
ಅಷ್ಟು ಘನತೆಯ ಸಂಬಂಧಗಳು ಸ್ೃಷ್ಟಿಯಾಗುತ್ತವೆ.
ಹಾಗಾಗಿ ನಿಜದ ಅರಿವಿನ ಅರಿವಿರುವ ಅರ್ಜುನರ ಸ್ೃಷ್ಟಿ ಇಂದಿನ ತುರ್ತು ಅನಿಸಿತು.
ಚಿತ್ರೆಯರನ್ನ. , ಅಂಥ ಮನಸಿನವರನ್ನ ಉಳಿಸಿಕೊಳ್ಳೋಣ.

ಭಾನುವಾರ, ಜೂನ್ 5, 2016

ನೃತ್ಯ ನಿಕೇತನ ಕೊಡವೂರು { ರಿ } - ಟಾಗೋರ್ ಅವರ ನೃತ್ಯ ನಾಟಕ -’ಚಿತ್ರಾ " { ನಿ- ಡಾ / ಶ್ರೀಪಾದ ಭಟ್ }

Photo
Tagore's Chitra -Nritya niketana Kodavoor { r } Udupi , Directed by Dr. Sripada Bhat
ಉತ್ತಮವಾದ ಒಂದು ನೃತ್ಯ ನಾಟಕ ವನ್ನು ನಮ್ಮ ತಂಡಕ್ಕೆ ಕಟ್ಟಿ ಕೊಟ್ಟ ನಿರ್ದೇಶಕರಾದ ಡಾ|| ಶ್ರೀಪಾದ ಭಟ್ ರವರಿಗೆ,ನಿರ್ದೇಶಕ ರೊಂದಿಗೆ ಸಂಗೀತದಲ್ಲಿ ಸಹಕರಿಸಿದ ಬಾಲಚಂದ್ರ ಭಾಗವತರಿಗೂ,ಉಷಾ,ಪೂಜಾ,ಹಿರೇಮಠ ರವರಿಗೂ,ಮಾಧವಾಚಾರ್,ಲಕ್ಷ್ಮೀನಾರಾಯಣ ಉಪಾಧ್ಯ,ಭಕ್ತ,ಸುಧೀಂದ್ರ,ದೀಪಕ್,ಜಯಂತ್,ವಿನಾಯಕ್,ನೃತ್ಯ ಸಂಯೋಜನೆ ಮಾಡಿದ, ಮಾನಸಿ,ಸಹಕರಿಸಿದ ದೀಮಹಿ,ಅನಘ,ಬೆಳಕುಸಂಯೋಜಿಸಿದ ರಾಜುಮಣಿಪಾಲ್,ಭುವನ್,ಕೌಶಿಕ್ ರಾಘು,ಸುಧಾ ಮೇಡಂ,ಪ್ರಸಾದ್ ಮಟ್ಟು,ಪ್ರಕಾಶ್ ಕುಂಜಿಬೆಟ್ಟು ಪ್ರೊ|| ಮುರಳೀಧರ ಉಪಾಧ್ಯ,ಶಾರದ ಉಪಾಧ್ಯ,ದಾಮೋದರ ನಾಯಕ್ ವಸ್ತ್ರ ವಿನ್ಯಾಸ ಮಾಡಿದ ಸುದರ್ಶನ, ಹಾಗೂ ಶಾಂಭವಿಗೂ ಕಲಾವಿದೆಯರಾಗಿ ಸಹಕರಿಸಿದ ಮಾನಸಿ, ಅನಘ,ಧೀಮಹಿ,ವಿಂದ್ಯ,ಸುರಭಿ,ಶಾಂಭವಿ,ಸಿಂಚನ,ಶ್ರೇಯ ಆಚಾರ್ಯ,ಶ್ರೇಯಾ ಪೈ,ನಿಖಿತ,ಅಶ್ವಿನಿ,ಸಾಧನ,ಪೂರ್ವಿ,ಸಂಜನ,ಶ್ರೇಯಾ ಭಟ್,ಭಾವನ,ವಿದ್ಮಹಿ,ಪ್ರಿಯಂವದ  ಹಾಗೂ ಚಿನ್ನಾರಿ ತಂಡಕ್ಕೂ,ಮತ್ತು ನಾಗೇಂದ್ರ ಪೈ ಯವರಿಗೂ,ನಮ್ಮವಿದ್ಯಾರ್ಥಿಗಳ ಹೆತ್ತವರಿಗೂ ಹಾಗೂ ಪ್ರತ್ಯಕ್ಷವಾಗಿ ,ಪರೋಕ್ಷವಾಗಿ ಸಹಕರಿಸಿದ,ಈ ನೃತ್ಯ ನಾಟಕದ ಯಶಸ್ಸಿನಲ್ಲಿ,ಕೈಜೋಡಿಸಿದ ಎಲ್ಲರಿಗೂ ನ್ರತ್ಯನಿಕೇತನ ಕೊಡವೂರು ಪರವಾಗಿ ಹ್ರತ್ಪೂರ್ವಕ ವಂದನೆ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ -ಸುಧೀರ್ ಕೊಡವೂರು