ಗುರುವಾರ, ಜೂನ್ 30, 2016

ನಿಡುವಜೆ ರಾಮ ಭಟ್ - ಸುರಭಿಯ ನಾಟ್ಯದ ಒಡನಾಟ


Wednesday, June 29, 2016



ಸುರಭಿಯ  ನಾಟ್ಯದ ಒಡನಾಟ
ನಿಡುವಜೆ ರಾಮ ಭಟ್
ಚಿತ್ರ: ಮುರಳೀಧರ್, ಕೊಡವೂರು.
      ನೃತ್ಯದ ಬಗ್ಗೆ ಅದಮ್ಯ ಪ್ರೀತಿ ಬೆಳೆಸಿಕೊಂಡಿರುವ ಬಾಲ ಪ್ರತಿಭೆ ಸುರಭಿ,
ಉಡುಪಿಯ ಕೊಡವೂರಿನ ನೃತ್ಯ ನಿಕೇತನದ ನಿದರ್ೇಶಕ ಗುರು ವಿ||ಸುಧೀರ್ ರಾವ್, ವಿ||ಮಾನಸಿ ಸುಧೀರ್ ದಂಪತಿಯ ಸುಪುತ್ರಿ.
     ಸುರಭಿ ಕಳೆದ ಎರಡು ವರ್ಷಗಳಿಂದ ತನ್ನ ಹೆತ್ತವರ  ಮಾರ್ಗದರ್ಶನದಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದು,  ಸಂಸ್ಥೆಯ ನೂರಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳಲ್ಲಿ ತನ್ನ ನೃತ್ಯ ಪ್ರದರ್ಶನವನ್ನು ನೀಡಿದ್ದಾಳೆ. ಪ್ರಸಿದ್ಧ ರಂಗ ನಿದರ್ೇಶಕರ ಎರಡು ನಾಡಕ ಕಮ್ಮಟಗಳಲ್ಲಿ ತರಬೇತಿ ಪಡೆದಿರುವ ಸುರಭಿ ಹಲವು ನಾಟಕ, ನೃತ್ಯ ರೂಪಕ, ನೃತ್ಯ ನಾಟಕಗಳಲ್ಲಿ ಪಾತ್ರವಹಿಸಿದ್ದಾಳೆ. ಚಿತ್ರಕಲೆ, ಸಾಹಿತ್ಯಗಳಲ್ಲಿ ವಿಶೇಷ ಆಸಕ್ತಿ ಇರುವ ಇವಳು ಜಿಲ್ಲಾ ಮಟ್ಟದ ಕಥೆ ಹೇಳುವ ಸ್ಪಧರ್ೆಯಲ್ಲಿ ಬಹುಮಾನ ಪಡೆದಿದ್ದಾಳೆ.
     ಇಷ್ಟೆಲ್ಲ ಸಾಧನೆಗೈದ ಈ ಬಾಲೆ ಉಡುಪಿಯ ಸೈಂಟ್ಮೇರೀಸ್ ಶಾಲೆಯ ಮೂರನೇ ತರಗತಿಯ ವಿದ್ಯಾಥರ್ಿನಿ ಎಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೇ? ಈಕೆ ತನ್ನ ಎಂಟನೇ ಹುಟ್ಟುಹಬ್ಬದಂದು ಭರತನಾಟ್ಯ ರಂಗಪ್ರವೇಶ ಮಾಡಿ ಇನ್ನೂ ಅಚ್ಚರಿ ಮೂಡಿಸಿದ್ದಾಳೆ!
     ಇತ್ತೀಚೆಗೆ ಉಡುಪಿಯ ರಾಜಾಂಗಣ ಸಭಾಂಗಣದಲ್ಲಿ ಪಯರ್ಾಯ ಶ್ರೀ ಪೇಜಾವರ ಅಧೋಕ್ಷಜ ಶ್ರೀಕೃಷ್ಣ ಮಠದ ಉಭಯ ಶ್ರೀಪಾದರ ಆಶೀವರ್ಾದದೊಂದಿಗೆ ತುಂಬು ಪ್ರೇಕ್ಷಕರ ಸಮ್ಮುಖದಲ್ಲಿ ನೀಡಿದ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
     ಮೊದಲಿಗೆ ಪುಷ್ಪಾಂಜಲಿ(ವೃಂದಾವನ ಸಾರಂಗ, ಆದಿತಾಳ)ಯಲ್ಲಿ 'ಕಾಲೇವರ್ಷತು ಪರ್ಜನ್ಯ' ಎಂಬ ದೀಪಕ್ ಹೆಬ್ಬಾರರ ರಚನೆಯನ್ನು ಸಂಚಾರಿಭಾವದಲ್ಲಿ ಪ್ರದಶರ್ಿಸಿದ್ದು, ಎರಡನೇ ಕೃತಿ 'ಗಜಾನನಯುತಂ ಗಣೇಶ್ವರಂ' ಇದರಲ್ಲಿ ಗಣಪತಿಗೆ ಆನೆಯ ಮುಖ ಬಂದ ಕತೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದಳು.
     ನಂತರದಲ್ಲಿ ಪ್ರಮುಖ ಪದವರ್ಣ.  'ಸವಿಯುವ ಬಾ ಸ್ನೇಹ ಪ್ರೇಮಗಳ'(ಶುದ್ಧ ಧನ್ಯಾಸಿ, ಆದಿತಾಳ) ಎಂಬ ಪ್ರಸನ್ನ ಬೆಂಗಳೂರು ಅವರ ರಚನೆಗೆ ಬಾಲಸುಬ್ರಹ್ಮಣ್ಯ ಶರ್ಮ ಅವರು ನೃತ್ಯ ಸಂಯೋಜನೆ ಮಾಡಿದ್ದು, ಈ ಕೃತಿಯಲ್ಲಿ ಸುದಾಮನ ಕತೆಯನ್ನು ಆಯ್ದುಕೊಂಡು ಸ್ನೇಹವೆಂದರೆ ಕೃಷ್ಣ ಸುದಾಮನಂತಿರಬೇಕು ಎಂಬುದನ್ನು ಸೊಗಸಾಗಿ ಸಾರಲಾಯಿತು. ಅಜರ್ುನನಿಗೆ ಶ್ರೀಕೃಷ್ಣನ ಸಾರಥ್ಯ, ಗೀತೋಪದೇಶ ಮೊದಲಾದ ಸನ್ನಿವೇಶಗಳ ಅಭಿನಯವನ್ನು ಈ ಬಾಲೆ ಮಾಡಿದ್ದು ನೋಡುಗರ ಮನಕ್ಕೆ ಮುದ ನೀಡಿತು. ಗೀತೋಪದೇಶದಲ್ಲಿ ಯದಾ ಯದಾಹಿ ಧರ್ಮಸ್ಯ . ., ಪರಿತ್ರಾಣಾಯ ಸಾಧೂನಾಂ . . ಮೊದಲಾದ ಸನ್ನಿವೇಶಗಳನ್ನು ಸುಮಾರು 20 ನಿಮಿಷಗಳ ಕಾಲ ದಣಿವಿಲ್ಲದೆ ಪ್ರಸ್ತುತಪಡಿಸಿದ್ದು ಅಚ್ಚರಿ ಮೂಡಿಸಿತು.
     ಮುಂದೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಕೃತಿ ಮಕ್ಕಳ ಮಗ್ಗಿಯಂತಿರುವ ಸಾಹಿತ್ಯ 'ಒಂದು ಎಂದರೆ ಒಂದು'(ರಾಗ ಮಾಲಿಕೆ, ಆದಿತಾಳ)ಎಂಬ ಒಂದರಿಂದ ಹತ್ತು ಅಂಕೆಯಲ್ಲಿ ಕೃಷ್ಣನ ಜನನದಿಂದ ಕಂಸನ ಮರಣದ ವರೆಗಿನ ಸನ್ನಿವೇಶಗಳನ್ನು ಸಂಚಾರಿ ಭಾವದಲ್ಲಿ ಪ್ರದಶರ್ಿಸಿದಳು.  ಮಧೂರು ಬಾಲಸುಬ್ರಹ್ಮಣ್ಯಂ ಸಂಗೀತ ಸಂಯೋಜಿಸಿದ ಈ ಕೃತಿಯಲ್ಲಿ ಕೃಷ್ಣನ ಜನನ, ಗೋಕುಲದಲ್ಲಿ ಬಾಲಲೀಲೆ ಮೊದಲಾದುವುಗಳನ್ನು ನಿರೂಪಿಸುವಲ್ಲಿಯೂ ಈ ಬಾಲೆ ಹಿಂದೆ ಬೀಳಲಿಲ್ಲ!

     ಅಠಾಣ ರಾಗ, ರೂಪಕತಾಳದಲ್ಲಿ ಮಧುರೈ ಮೀನಾಕ್ಷಿಯ ಕುರಿತಾಗಿ 'ಮಧುರಗಾನ ರೂಪಿಣಿ ಮಧುರಾಪುರಿ ವಾಸಿನಿ' ಎಂಬ ಕೃತಿಯ 'ತಿಲ್ಲಾನ'ವನ್ನು ಪ್ರದಶರ್ಿಸಿ ನೃತ್ಯವನ್ನು ಸಮಾಪನಗೊಳಿಸುವಲ್ಲಿ ಯಶಸ್ವಿಯಾದಳು. ಮನೆಯಲ್ಲಿ ಆಟವಾಡಿಕೊಂಡು ಇರಬೇಕಾದ ಎಳೆಯ ಪ್ರಾಯದ ಈಕೆ ನಾಟ್ಯದೊಡನೆಯೇ ಆಟವಾಡಿ ಕಲೆಯ ಅಪೂರ್ವ ಪ್ರದರ್ಶನಗೈದಿರುವುದು ಶ್ಲಾಘನೀಯ.
    ಹಿನ್ನೆಲೆಯಲ್ಲಿ ವಿ||ಸುಧೀರ್ ರಾವ್ (ನಟುವಾಂಗ), ಉನ್ನಿಕೃಷ್ಣನ್ ನಂಬೂದರಿ ಕುತ್ತಿಕೋಲ್ (ಹಾಡುಗಾರಿಕೆ), ದೇವೇಶ್ ಭಟ್ ಕಿದಿಯೂರು(ಮೃದಂಗ), ಪಿ.ಶ್ರೀಧರ ಆಚಾರ್ಯ, ಪಾಡಿಗಾರು (ಪಿಟೀಲು), ದೀಪಕ್ ಹೆಬ್ಬಾರ್(ಕೊಳಲು), ಪ್ರಕಾಶ್ ಕುಂಜಿಬೆಎಟ್ಟು (ವಣರ್ಾಲಂಕಾರ) ಉತ್ತಮವಾಗಿ ಸಹಕರಿಸಿದರು.
    ನೃತ್ಯ ನಿಕೇತನ ಕೊಡವೂರು ಸಂಸ್ಥೆಯು ತನ್ನ ರಜತ ಮಹೋಹತ್ಸವದ ಅಂಗವಾಗಿ ಹತ್ತು ದಿನಗಳ ಕಾಲ ನೃತ್ಯ, ಗಾಯನ, ನಾಟಕ, ಯಕ್ಷಗಾನ, ರೂಪಕ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದು ಸ್ತುತ್ಯರ್ಹವೆನಿಸಿತು.
**  **  **
ಎನ್. ರಾಮ ಭಟ್, 'ಪ್ರಶಾಂತಿ',
ಗುಂ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ